Recipes

 
22-Mar-2010 by kumudashankar

ಹೀರೆಕಾಯಿ ಹುಳಿ:


ಬೇಕಾಗುವ ಸಾಮಗ್ರಿಗಳು:


ತೊಗರಿಬೇಳೆ
ಹೀರೆಕಾಯಿ ಹೆಚ್ಚಿದ್ದು
ಟಮೋಟ ಹಣ್ಣು
ಈರುಳ್ಳಿ ಸ್ವಲ್ಪ
ಕಾಯಿತುರಿ ಸ್ವಲ್ಪ
ಸಾರಿನ ಪುಡಿ
ಹುಣಸೇರಸ - ೧ ಚಮಚ
ಅರಿಶಿಣದ ಪುಡಿ
ಎಣ್ಣೆ
ಉಪ್ಪು
ಜೊತೆಗೆ ಬೇಕಾದರೆ ಆಲೂಗೆಡ್ಡೆ/ಮೂಲಂಗಿ/ಹುರುಳಿಕಾಯಿ ಸೇರಿಸಿಕೊಳ್ಳಬಹುದು.


ತಯಾರಿಸುವ ವಿಧಾನ:


ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು, ಅದಕ್ಕೆ ಹೀರೆಕಾಯಿ ಮತ್ತು ಟಮೋಟ ಹಾಕಿ,(ಇತರೆ ತರಕಾರಿ ಬಳಸುವುದಾದರೆ ಅದನ್ನು ಸೇರಿಸಿ) ತರಕಾರಿ ಬೇಯುವವರೆಗೂ ಬೇಯಿಸಿ, ನಂತರ ಸಾರಿನಪುಡಿ, ಹುಣಸೇರಸ ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ, ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಒಗ್ಗರಣೆ ಸೇರಿಸಿ. ಇಳಿಸಿ.
* ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
* ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.
* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.
* ಈಗ ರುಬ್ಬಿ ತಯಾರಿಸುವ ಸಾಂಬಾರ್ ಗಿಂತ ಪುಡಿ ಉದುರಿಸಿ ತಯಾರಿಸುವ ಸಾರುಗಳೂ ಸಾಮಾನ್ಯವಾಗಿದೆ. ಇದು ಲೈಟ್ ಆಗಿರುತ್ತದೆ.
*  ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್/ಬದನೆಕಾಯಿ ಸಹ ಸೇರಿಸಿ ತಯಾರಿಸಬಹುದು. ತರಕಾರಿಗಳು ಒಂದೇ ಹಾಕಿ ತಯಾರಿಸಿದಾಗ ಅದು ಅದರದ್ದೇ ಹೆಸರಿನ ಹುಳಿ ಆಗಿರುತ್ತದೆ. ಜೊತೆಗೆ ಬೇರೆ ಹಾಕಿದಾಗ ಅದು ಕಾಂಬಿನೇಷನ್ ಸಾರು ಆಗುತ್ತದೆ,ಅಷ್ಟೇ. ನಮಗೆ ಯಾವ ತರಕಾರಿ ಬಳಸಲು ಇಷ್ಟವೋ ಆ ತರಕಾರಿ ಬಳಸಿದರೆ ಆಯಿತು.
* ಕುಕ್ಕರ್ ನಲ್ಲಿ ತಯಾರಿಸುವುದು ಸುಲಭ. ಅದನ್ನು ತಯಾರಿಸುವ ಬಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಅಲ್ವಾ. ಆಗಾಗಿ ಅದರ ವಿವರ ಬೇಡ ಎನಿಸುತ್ತೆ.
* ಯಾವುದೇ ಸಾಂಬಾರ್ ಅಥವಾ ಹುಳಿ ತಯಾರಿಸಿದರೂ, ಪುಡಿ ಚೆನ್ನಾಗಿದ್ದು,ರುಚಿಯಾಗಿದ್ದರೆ ಮಾತ್ರ ಸಾರು ರುಚಿಯಾಗಿರುತ್ತದೆ.

Comments

Anonymous says :

Great! I Like Kannada.
Posted on: 22 March 2010 - 3:01am

Anonymous says :

Simple and easy recipe.Nice *
Posted on: 22 March 2010 - 3:02am

Questions, Comments and Reviews

The content of this field is kept private and will not be shown publicly.
Quantcast
happy valentine day