Kannada Recipes

 
22-Mar-2010 by kumudashankar

ಗೋಧಿನುಚ್ಚಿನ ಸಿಹಿ ಪೊಂಗಲ್:


ಸಾಮಗ್ರಿಗಳು:


ಗೋಧಿ ನುಚ್ಚು - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಹಾಲು - ಒಂದು ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು


ತಯಾರಿಸುವ ವಿಧಾನ:


ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಕೇಸರಿದಳಗಳನ್ನು ಒಂದೆರಡು ಚಮಚ ಹಾಲಿನೊಂದಿಗೆ ನೆನೆಸಿಡಿ.
ಗೋಧಿನುಚ್ಚು ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ, ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು , ಅದಕ್ಕೆ ಹಾಲು ಹಾಕಿ ಸಕ್ಕರೆ ಬೆರೆಸಿ ಕುದಿಯಲು ಬಿಡಿ. ನಂತರ ಬೆಂದ ನುಚ್ಚು ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ನೆನೆಸಿದ ಕೇಸರಿ, ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಕೊಬ್ಬರಿ ತುರಿಯನ್ನು ಸಹ ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಪೊಂಗಲ್ ತಿನ್ನಲು ತಯಾರಾಗುತ್ತದೆ.
* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.
* ಗೋಧಿನುಚ್ಚಿನಿಂದ ತಯಾರಿಸಿದ ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಅಕ್ಕಿ ಬದಲಿಗೆ ಅವರು ಗೋಧಿ ನುಚ್ಚು ಬಳಸಬಹುದು.
* ಇದು ಸಹ ತುಂಬಾ ರುಚಿಯಾಗಿರುತ್ತದೆ. ಗೋಧಿಯಿಂದ ಅನೇಕ ಸಿಹಿ ತಯಾರಿಸುತ್ತೇವೆ.

Comments

Anonymous says :

Very nice kannada recipe. I like this recipe
Posted on: 22 March 2010 - 2:59am

Anonymous says :

Good work !!
Posted on: 22 March 2010 - 3:00am

Anonymous says :

Nice recipe, but how do I read it ?
Posted on: 22 March 2010 - 11:01am

shantihhh says :

English please so others can enjoy!
Posted on: 22 March 2010 - 2:02pm

editor says :

Please post the recipes in English, so that non-regional users too can make use of it.
Posted on: 22 March 2010 - 9:21pm

Questions, Comments and Reviews

The content of this field is kept private and will not be shown publicly.
Quantcast